Sign up to save your library
With an OverDrive account, you can save your favorite libraries for at-a-glance information about availability. Find out more about OverDrive accounts.
Find this title in Libby, the library reading app by OverDrive.

Search for a digital library with this title
Title found at these libraries:
Library Name | Distance |
---|---|
Loading... |
ಕನ್ನಡದ ಜನಪ್ರಿಯ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ಹೊಸ ಕಾದಂಬರಿ ಉತ್ತರ ಕಾಂಡ. ಮಹಾಭಾರತದ ವಾಸ್ತವ ಚಿತ್ರಣ ನೀಡುವ 'ಪರ್ವ' ಕಾದಂಬರಿ ರಚಿಸಿದ್ದ ಭೈರಪ್ಪನವರು ಈಗ ರಾಮಾಯಣದ 'ಉತ್ತರಕಾಂಡ'ದ ವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಾಮಾಯಣದ ದ್ವಿತೀಯಾರ್ಧ ಅಂದರೆ ರಾಮನು ರಾವಣನನ್ನು ಯುದ್ಧದಲ್ಲಿ ಸೋಲಿಸಿ ಅಯೋಧ್ಯೆಗೆ ಮರಳಿದ ನಂತರ ನಡೆಯುವ ಪ್ರಸಂಗಗಳು ವಾಲ್ಮೀಕಿ ಕವಿಯ ಉತ್ತರಕಾಂಡದಲ್ಲಿವೆ. ಭೈರಪ್ಪನವರು ಕೂಡ ಆ ಭಾಗವನ್ನು ಕಥೆ ಹೇಳುವುದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ರಾಮರಾಜ್ಯ ಸ್ಥಾಪನೆಯಾದ ನಂತರ ನಡೆಯುವ ಘಟನೆಗಳು ಈ ಕಾದಂಬರಿಯಲ್ಲಿ ಪ್ರಧಾನ ಭೂಮಿಕೆಯಲ್ಲಿವೆ.ಅಗಸನ ಟೀಕೆ, ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಬಿಡುವ, ಲವಕುಶರ ಜನನ, ವಾಲ್ಮೀಕಿಯ ಆಶ್ರಮದಲ್ಲಿ ವಿದ್ಯಾಭ್ಯಾಸ ನಡೆಸುವ, ನಂತರ ಲವಕುಶ-ರಾಮ ನಡುವಿನ ಕಾಳಗ. ಹೀಗೆ ರಾಮಾಯಣದ ಪುನರ್ ಸೃಷ್ಟಿ ಈ ಭಾಗದಲ್ಲಿದೆ. ಭೈರಪ್ಪನವರ ಈ ಕಾದಂಬರಿಯಲ್ಲಿ ರಾಮನಿಗಿಂತ ಸೀತೆಗೇ ಹೆಚ್ಚು ಮನ್ನಣೆ- ಪ್ರಾಧಾನ್ಯತೆ. ಕಥಾನಾಯಕಿ ಸೀತೆಯ ಪಾತ್ರ ತುಂಬಾ ಸಶಕ್ತವಾಗಿ ಮೂಡಿಬಂದಿದೆ. ಸೀತೆಯ ಮುಂದೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನೇ ಪೇಲವವಾಗಿ ಕಾಣುತ್ತಾನೆ. ಯುದ್ದಕ್ಕೆ ಮುನ್ನ ಅಯೋಧ್ಯೆಯ ಅರಮನೆಯಲ್ಲಿ ಸೀತೆಯು ಸಭಾಸದರ ಮುಂದೆ ಮಾಡುವ ವಾದವು ಇಡೀ ಕಾದಂಬರಿಯ ಅತ್ಯುತ್ತಮ ಭಾಗ. ಎಲ್ಲ ಪ್ರಮುಖರ ಸಮ್ಮುಖದಲ್ಲಿಯೇ ಸೀತೆಯು ಲವಕುಶರು ರಾಮನ ಮಕ್ಕಳಲ್ಲ ಎಂದು ಹೇಳುವ ಮೂಲಕ ಬೆಚ್ಚಿ ಬೀಳಿಸುತ್ತಾನೆ. ಗರ್ಭದಲ್ಲಿ ಮಕ್ಕಳು ಇರುವಾಗಲೇ ತೊರೆದಿರುವುದರಿಂದ ರಾಮನಿಗೆ ಪಿತೃತ್ವ ಸಿದ್ಧಿಸಿಲ್ಲ ಎಂದು ಹೇಳುವ ಗಟ್ಟಿಗತನ ಸೀತೆಯ ಪಾತ್ರದ ಜೀವಂತಿಕೆಗೆ ಸಾಕ್ಷಿ. ರಾಮಾಯಣದ ವಿಭಿನ್ನ ರೀತಿಯಲ್ಲಿ ಚಿತ್ರಿಸಿರುವ ಭೈರಪ್ಪ ಈ ಕಾದಂಬರಿಯು ಸಹಜವಾಗಿಯೇ ಓದುಗನಿಗೆ ಪ್ರಿಯವಾಗುತ್ತದೆ.